Index   ವಚನ - 10    Search  
 
ಕುರುಡನ ಮುಂಡಕ್ಕೆ ಹೆಳವನ ಶಿರಸ್ಸು ಸ್ಥಾಪ್ಯವ ಮಾಡಿದರಯ್ಯಾ. ಅದಕ್ಕೆ ಮೋಟನು ಪರಿಚಾರಕ ನೋಡಾ. ಮೂಗ ಹೇಳುವ ಮಾತನು ಬಧಿರ ಕೇಳಿ, ಅತ್ತೆಯನಳಿಯ ಮದುವೆಯಾಗಿ, ಅವರಿಬ್ಬರ ಸಂಗದಿಂದ ಹುಟ್ಟಿತೊಂದು ಮಗು. ಮೊರೆಗೆಟ್ಟು ತಂದೆ ಮಗಳ ಮದುವೆಯಾಗಿ, ತ್ರಿಪುರದ ಮಧ್ಯದೊಳಗೆ ಕ್ರೀಗಳ ದೇಗುಲ ನಿಂದಿತ್ತು. ದೇವರ ನೋಡಹೋದಡೆ ದೇವರು ದೇಗುಲವ ನುಂಗಿದರು. ಇದ ಕಂಡು ಆನು ಬೆರಗಾದೆನು, ನಿಜಗುರು ಭೋಗೇಶ್ವರನಲ್ಲಿ.