Index   ವಚನ - 16    Search  
 
ಅಣುರೇಣು ಮಹಾತ್ಮನೆಂದೆಂಬರು. ಅಣುರೇಣು ತೃಣಕಾಷ್ಠದೊಳಗಿರ್ಪನೆಂಬರು. ಅಮ್ಮೆನಯ್ಯಾ, ನಾನೆನಲಮ್ಮೆನಯ್ಯಾ. ಶರಣಸನ್ನಹಿತನು, ಭಕ್ತಕಾಯ ಮಮಕಾಯನು, ದಾಸೋಹ ಪರಿಪೂರ್ಣನು, ಸದುಹೃದಯದಲ್ಲಿ ಸಿಂಹಾಸನವಾಗಿ ಅಗಲದಿರ್ಪನು ಕಲಿದೇವಯ್ಯ.