Index   ವಚನ - 18    Search  
 
ಅನಾದಿ ಅಖಂಡಪರಿಪೂರ್ಣ ನಿಜಾಚರಣೆಯನಗಲದೆ ಮಹಾವೈರಾಗ್ಯದಿಂದ ಪರಶಿವಲಿಂಗಕೂ ತನಗೂ ಚಿನ್ನ ಬಣ್ಣದ ಹಾಂಗೆ, ಪುಷ್ಪ ಪರಿಮಳದ ಹಾಂಗೆ, ಶಿಖಿ ಕರ್ಪುರದ ಹಾಂಗೆ, ಉಪ್ಪು ಉದಕದ ಹಾಂಗೆ, ಅಗ್ನಿ ವಾಯುವಿನ ಹಾಂಗೆ, ಕ್ಷೀರ ಕ್ಷೀರ ಬೆರದ ಹಾಂಗೆ, ವಾರಿ ಶರಧಿಯ ಕೂಡಿದ ಹಾಂಗೆ, ತಿಳಿದುಪ್ಪ ಹೆರೆದುಪ್ಪವಾದ ಹಾಂಗೆ, ಹೆಪ್ಪು ನವನೀತದ ಹಾಂಗೆ ಸೂಜಿಕಲ್ಲಾದಂತೆ ಮರ್ತ್ಯದಲ್ಲಿರ್ದು, ಕನ್ನಡಿಯ ಪ್ರತಿಬಿಂಬ ಸೂರ್ಯನ ಕಿರಣದಂತೆ ಕಾಲ ಕಾಮರ ಪಾಶಕ್ಕೆ ಹೊರಗಾಗಿ, ಬಾವನ್ನದಿರವನೊಳಕೊಂಡು ಸರ್ವಾಚಾರಸಂಪತ್ತಿನಲ್ಲಿ ಎಡೆದೆರಪಿಲ್ಲದೆ ಮಹಾಮೋಹಿಯಾಗಿ, ಲೋಕಪಾವನಕ್ಕೋಸ್ಕರ ಸಂಚರಿಸುವಾತನೆ, ನಿರಂಜನ ಭಕ್ತಜಂಗಮ ಕಾಣಾ, ಕಲಿದೇವರದೇವ.