Index   ವಚನ - 19    Search  
 
ಅಮೃತಮಥನದಲ್ಲಿ ಅಜ ಹರಿ ಸುರಪ ವಾಲಿ ಸುಗ್ರೀವರಳಿದರು. ಕಾಶಿಯಲ್ಲಿ ಬ್ರಹ್ಮ ವಿಷ್ಣುಗಳಳಿದರು. ಕೇದಾರದಲ್ಲಿ ಪಾಂಡವರಳಿದರು, ಕಲ್ಯಾಣದಲ್ಲಿ ವ್ಯಾಳನಳಿದನು. ಶ್ರೀಶೈಲದಲ್ಲಿ ಹಿರಣ್ಯ ಧನುಜ ನಾಗಾರ್ಜುನರಳಿದರು. ಪಾತಾಳ ಲಂಕೆಯಲ್ಲಿ ಮಹಿರಾವಣನಳಿದನು. ಲವಣ ಲಂಕೆಯಲ್ಲಿ ಲಕ್ಷ್ಮಿಗಳುಪಿದವನಳಿದನು. ದಶರಥನ ತೋಹಿನಲ್ಲಿ ಮಂಡುಬಲಚೌಡನಳಿದನು. ಭೀಮನ ಕೈಯಲ್ಲಿ ಕೀಚಕನಳಿದನು. ಮುನಿ ಕರ್ಣಿಕೆಯ ಶಿರವ ಹರಿದು, ಸುರಪನಜಹರಿಗಳು ಶಾಪಹತರಾದರು. ಋಷಿಯ ಸತಿಗಳುಪಿ ಸುರಪ ಮೈಯನಳಿದ. ಭೀಷ್ಮರು ಕುಂಭಕರ್ಣ ದ್ರೋಣ ಜಾಂಬರು ನಿದ್ರೆಯಲ್ಲಿ ಅಳಿದರು. ವ್ಯಾಧರ ಬಾಣದಲ್ಲಿ ಬಿದ್ದರು ವಿಷ್ಣು ಪಾಂಡ್ಯರಾಯರು. ವಿಷದ ಪಣ್ಣಿಂದಳಿದ ಪರೀಕ್ಷಿತರಾಯನು. ಪರಶುರಾಮನ ಕೈಯಲಿ ಜಮದಗ್ನಿ ಮುನಿಯ ವಧೆಯಿಂದ ಕಾರ್ತಿಕರಳಿದರು. ವೃಷಭನ ವಧೆಯಿಂದ ವೀತರಾಜನಳಿದ. ಕುರುಕ್ಷೇತ್ರದಲ್ಲಿ ಕೌರವರಳಿದರು. ಮಾಸನೂರಲ್ಲಿ ಸಿದ್ಧರಳಿದರು. ಕೊಲ್ಲಾಪುರದಲ್ಲಿ ಹರಿ ಅಜ ಇಂದ್ರ ದಿಕ್ಪಾಲಕರು ತೃಣಕೆ ಲಘುವಾದರು. ಹೋಮ ಕಾಮ ತ್ರಿಣೇತ್ರ ಪಂಚಮುಖರೆಲ್ಲ ಮಹಾಪ್ರಳಯದಲ್ಲಿ ಅಳಿದರು.ಇನ್ನು ಬಿಜ್ಜಳರಾಯನ ಅಳಿವಿನುಳಿವಿನ ಹವಣವೇನು ಕಲಿದೇವರದೇವಾ.