Index   ವಚನ - 65    Search  
 
ಆರು ಜನ್ಮದವರೆಂಬರು ಬಸವಣ್ಣನ. ಈ ಗಾರುಮಾತ ಕೇಳಲಾಗದು. ಆರುಸ್ಥಲ ಆರುಪಥವ ತೋರಲು, ಪರಶಿವ ತಾ ಮೂರುಮೂರ್ತಿಯಾದ. ಆರಾರುತತ್ವಂಗಳ ಮೇಲಣಾತ ಆ ಬಸವಣ್ಣನೆ ಕಾಣಾ, ಕಲಿದೇವರದೇವಾ.