Index   ವಚನ - 73    Search  
 
ಇಷ್ಟಲಿಂಗ ಪೃಥ್ವಿಯಲ್ಲಿ ಸ್ಥಾಪ್ಯವಾದಡೇನು ? ಅಪ್ಪುವಿನಲ್ಲಿ ಅಳಿದಡೇನು ? ಇಷ್ಟಲಿಂಗವು ಶಕ್ತಿಸಂಪುಟದಿಂದ ಉತ್ಕೃಷ್ಟವಾದಡೇನು ? ಅಹುದಲ್ಲವೆಂಬ ಅಜ್ಞಾನಮತಿಗಳೆದು ಮುನ್ನಿನಂತೆ ಪೂಜಿಸುವ ಭಕ್ತರ ತೋರಾ, ಕಲಿದೇವರದೇವಾ.