Index   ವಚನ - 75    Search  
 
ಈರೇಳುಭುವನಕ್ಕೆ ಕರ್ತನೊಬ್ಬನೆಂಬ ಆದಿಯನರಿಯದೆ, ಲಿಂಗವಂತಂಗೆ ಸೂತಕವೆಂಬ ನುಡಿಯ ಕೇಳಲಾಗದು. ಸತ್ತ ಕೋಣ ಕುರಿ ಕೋಳಿ ತಿಂಬ ಭೂತಪ್ರೇತ ದೈವದೆಂಜಲು ಭುಂಜಿಸುವವಗೆ, ಏಳೇಳುಜನ್ಮ ನರಕ ತಪ್ಪದೆಂದ ಕಲಿದೇವರದೇವಯ್ಯ.