Index   ವಚನ - 76    Search  
 
ಈರೇಳುಸ್ಥಲ, ಈರೈದುಸ್ಥಲ, ಅಷ್ಟಸ್ಥಲ, ನವಸ್ಥಲ, ತ್ರಿವಿಧಸ್ಥಲ, ಚತುರ್ಗ್ರಾಮಸ್ಥಲ. ಪಂಚವರ್ಣ, ದಶವರ್ಣ, ಸಪ್ತವರ್ಣ, ಪಡುವರ್ಣ, ಏಕವರ್ಣ, ದ್ವಿವರ್ಣಸ್ಥಲಂಗಳಲ್ಲಿ ಮುಖವಿಲ್ಲ ಮುಖವಿಲ್ಲ. ಪವಿತ್ರಾಂಕಿತಕ್ಕೆ ನೋಡಿ ಮಾಡುವ ಆರಂಭವನೇನೂ ಐದುದಿಲ್ಲ. ಬಸವನೆ ವಿಸ್ತಾರವೆನಗೆ. ಬಸವನೆ ನುಡಿ ಎನಗೆ, ಬಸವನೆ ನಡೆ ಎನಗೆ. ಬಸವನೆ ಗತಿ ಎನಗೆ, ಬಸವನೆ ಮತಿ ಎನಗೆ. ಬಸವನೆ ಇಹವೆನಗೆ, ಬಸವನೆ ಪರವೆನಗೆ. ಬಸವನಲ್ಲದೆ ಕಾಣೆ ಕಾಣಾ, ಕಲಿದೇವರದೇವಾ.