ಒಂದೆ ಭಾವದಿಂದ ಗುರುಲಿಂಗಾರ್ಚನೆ ಪೂಜೆಯಂ ಮಾಡಿ,
ಹಿಂದಣ ಭವಜನ್ಮ ದಂದುಗವನೆ ಗೆಲಿದು,
ಶಿವನ ಸಲುಸಂದ ಪ್ರಮಥರ
ಸರಿಯೆನಿಸಿಕೊಂಬುದು ಸಾಮಾನ್ಯವಲ್ಲ.
ಕಂದನ ಶಿವಗರ್ಪಿತವ ಮಾಡಿ,
ಸಿರಿಯಾಳಸೆಟ್ಟಿ ಕೈಲಾಸ ಕಾಬುದು ಸಂದೇಹವಾಗಿಹುದೆಂದ.
ಹೃದಯದ ಅಂಧಕಾರ ಹರಿಯಲೆಂದು,
ಗುರುದೇವನು ಬೆಳಗ ತೋರಿದ.
ಹಿಂದಣ ಸೂತಕ ತೊಳೆಯಲೆಂದು ನಿಂದರೂ
ಮಾಯಾಬಂಧನದಲ್ಲಿ ಸಿಲ್ಕಿ,
ಗುರುವಿಂಗೆ ವಂದನೆಯ ಮಾಡದೆ,
ಶಿವಗತಿಗೆ ಸಂದೆನೆಂಬ ಸ್ವಾಮಿದ್ರೋಹಿಗಳಿಗೆ
ಎಂದೂ ಗತಿಯಿಲ್ಲವೆಂದ, ಕಲಿದೇವರದೇವಯ್ಯ.
Art
Manuscript
Music
Courtesy:
Transliteration
Onde bhāvadinda guruliṅgārcane pūjeyaṁ māḍi,
hindaṇa bhavajanma dandugavane gelidu,
śivana salusanda pramathara
sariyenisikombudu sāmān'yavalla.
Kandana śivagarpitava māḍi,
siriyāḷaseṭṭi kailāsa kābudu sandēhavāgihudenda.
Hr̥dayada andhakāra hariyalendu,
gurudēvanu beḷaga tōrida.
Hindaṇa sūtaka toḷeyalendu nindarū
māyābandhanadalli silki,
guruviṅge vandaneya māḍade,
śivagatige sandenemba svāmidrōhigaḷige
endū gatiyillavenda, kalidēvaradēvayya.