ಕಡಲುಗಳ ಕ[ರ]ಗಳೊಳಗೆ ಮೊಗೆದು ಬರಿಕೆಯ್ವುತಿಹರು
ಕೆಲರು ಗಣೇಶ್ವರರು.
ಮೇರುಗಿರಿಗಳ ಮಿಡಿದು ಮೀಟುತ್ತಿಹರು ಕೆಲರು ಗಣೇಶ್ವರರು.
ಸಕಲಬ್ರಹ್ಮಾಂಡಗಳ ಹಿಡಿದು ಹಿಸುಕಿ ಕೆಡಹುತ್ತಿಹರು
ಕೆಲರು ಗಣೇಶ್ವರರು.
ಅಗ್ನಿ ವಾಯುಗಳ ಹಿಡಿದು ಹೊಸೆದುಹಾಕುತ್ತಿಹರು
ಕೆಲರು ಗಣೇಶ್ವರರು.
ರವಿ ಶಶಿಗಳನು ಧ್ರುವಮಂಡಲಂಗಳನು ಪೂರಕದಲ್ಲಿ ತೆಗೆತಂದು,
ರೇಚಕದಲ್ಲಿ ಬಿಡುತ್ತಿಹರು ಕೆಲರು ಗಣೇಶ್ವರರು.
ಬಯಲನಾಕಾರವ ಮಾಡಿ, ಆಕಾರವ ಬಯಲ ಮಾಡುತ್ತಿಹರು
ಕೆಲರು ಗಣೇಶ್ವರರು.
ಇಂತಿವರೆಲ್ಲರೂ ಕಲಿದೇವರದೇವಾ
ನಿಮ್ಮ ಬಸವಣ್ಣನ ನಿರಾಧಾರಪಥದಲ್ಲಿ ನಿಂದಿರ್ಪರು.
Art
Manuscript
Music
Courtesy:
Transliteration
Kaḍalugaḷa ka[ra]gaḷoḷage mogedu barikeyvutiharu
kelaru gaṇēśvararu.
Mērugirigaḷa miḍidu mīṭuttiharu kelaru gaṇēśvararu.
Sakalabrahmāṇḍagaḷa hiḍidu hisuki keḍahuttiharu
kelaru gaṇēśvararu.
Agni vāyugaḷa hiḍidu hoseduhākuttiharu
kelaru gaṇēśvararu.
Ravi śaśigaḷanu dhruvamaṇḍalaṅgaḷanu pūrakadalli tegetandu,
rēcakadalli biḍuttiharu kelaru gaṇēśvararu.
Bayalanākārava māḍi, ākārava bayala māḍuttiharu
kelaru gaṇēśvararu.
Intivarellarū kalidēvaradēvā
nim'ma basavaṇṇana nirādhārapathadalli nindirparu.