Index   ವಚನ - 115    Search  
 
ಕಲ್ಯಾಣಪಟ್ಟಣದಲ್ಲಿ ಕಲಕೇತಯ್ಯಗಳು ಕಿನ್ನರಯ್ಯಗಳ ಸ್ಥಾವರದೈವದ ಸೇವೆ, ಯಾಚಕತ್ವವ ಬಿಡಿಸಿ, ಗುರು ಕೊಟ್ಟ ಇಷ್ಟಲಿಂಗದಲ್ಲಿ ನಿಷ್ಠೆಯ ಗಟ್ಟಿಗೊಳಿಸಿ, ಘನವೀರಶೈವದ ಬಟ್ಟೆಯನರುಹಿದರೆಂಬುದ ಕೇಳಿ ನಂಬದೆ, ಸೃಷ್ಟಿಯ ಪ್ರತಿಷ್ಠೆಗೆ ಶರಣೆಂದಡೆ, ಮೆಟ್ಟುವ ನರಕದಲ್ಲಿ ಕಲಿದೇವಯ್ಯ.