Index   ವಚನ - 125    Search  
 
ಕಾಲ ನಡೆಯ ಪಶುಗಳೆಲ್ಲಕರೆದು ಹಯನಾದಡೆ ಮನೆ ಮನೆಗೆ ಅಳೆಯ ಹೊತ್ತು ಬಳಲಲೇಕಯ್ಯಾ? ಕಾಮಶಾಸ್ತ್ರವ ನೋಡಿದವರೆಲ್ಲ ಕಲಾಪರಿಣಿತರಾದಡೆ ಜಾರ ಜಾರೆಯರಾಗಲೇತಕೊ ಅಯ್ಯಾ? ಕೈದುವ ಹಿಡಿದವರೆಲ್ಲ ಕಲಿಗಳಾದಡೆ ಮಾಬಲವ ಕಂಡು ತಿರುಗಿ ಓಡಿಬರಲೇತಕೆ ಅಯ್ಯಾ? ಲಿಂಗವ ಕಟ್ಟಿದವರೆಲ್ಲ ನಿಜಭಕ್ತರಾದಡೆ ಮರಳಿ ಭವಕ್ಕೆ ಬರಲೇಕೋ ಕಲಿದೇವರದೇವಾ