Index   ವಚನ - 134    Search  
 
ಕೋಳಿ ಮತ್ಸ್ಯ ಕಿರಿಮೀನ ತಿಂಬವರ ಊರಲ್ಲಿ ಕುಲಜರೆಂದು ಕೂಡಿಕೊಂಬಿರಿ. ದೇವರದೇವಂಗೆ ಅಮೃತಾನ್ನವ ಹಾಕುವ ತಿಂಬ ಹೊಲೆಯನ ಊರಿಂದ ಹೊರಗೆ ಹೊರಡಿಸಿದಿರಿ ಅವರುಂಡ ಪುಲ್ಲಿಗೆ ತಿಪ್ಪಿಗೆ ಹಾಕಿಸಿಕೊಂಡಿತ್ತು ಲದ್ದಿಗೆಯಾಯಿತ್ತು ಸಗ್ಗಳೆಯಾಯಿತ್ತು ಸಿದ್ದಿಗೆಯ ತುಪ್ಪವ ತಿಂದು ಸಗ್ಗಳೆಯ ನೀರ ಕುಡಿದ ವಿಪ್ರರ ಕಂಡು ಛೀಯೆಂದು ನಾಚಿದೆನು ಕಾಣಾ ಕಲಿದೇವಯ್ಯಾ.