Index   ವಚನ - 166    Search  
 
ಜಂಗುಳಿದೈವವೆಂಬ ಜವನಿಕೆಯ ಶಿವನೊಡ್ಡಿದನು ನೋಡಾ. ಲಿಂಗದ ನಿಷ್ಠೆಯನರಿಯದೆ, ಅರುಹಿರಿಯರೆಲ್ಲ ಮರುಳಾಗಿ ನರಕಕ್ಕಿಳಿದರು ಆಗಮದ ಶುದ್ಧಿಯನರಿಯದೆ ಅನ್ಯದೈವಕ್ಕೆರಗುವ ಭಂಗಿತರೊಡನಾಡಿ ಕೆಡಬೇಡವೆಂದ, ಕಲಿದೇವಯ್ಯ.