ಬಿದ್ದು ಸತ್ತ [ಪಶು]ವ ತಿಂಬ ಹೊಲತಿಗೆ ಹೊಲೆಗಂಡು,
ಶುದ್ಧನೀರ ಮಿಂದಡೆ,
ಅವಳ ಮೊದಲ ಹೊಲೆ ಹೋಯಿತ್ತೆ?
ಮದ್ಯವ ಸೇವಿಸುವ ಹೊಲೆಯರು,
ದೈವಕ್ಕೆರಗಿ, ಕುಲದಲ್ಲಿ ಶುದ್ಧರಹೆವೆಂಬ ಪರಿಯೆಂತೊ?
ಮಲಭಾಂಡದ ಕುಲವೆಲ್ಲಾ ಒಂದೆ.
ಗೆಲುವಿಂಗೆ ಹೆಣಗುವ ಹದಿನೆಂಟುಜಾತಿಗಳು,
ಗುರುವಿನ ನೆಲೆಯನರಿಯದೆ,
ಕೆಟ್ಟಪ್ರಾಣಿಗಳನೇನೆಂಬೆನಯ್ಯಾ, ಕಲಿದೇವರದೇವ?
Art
Manuscript
Music
Courtesy:
Transliteration
Biddu satta [paśu]va timba holatige holegaṇḍu,
śud'dhanīra mindaḍe,
avaḷa modala hole hōyitte?
Madyava sēvisuva holeyaru,
daivakkeragi, kuladalli śud'dharahevemba pariyento?
Malabhāṇḍada kulavellā onde.
Geluviṅge heṇaguva hadineṇṭujātigaḷu,
guruvina neleyanariyade,
keṭṭaprāṇigaḷanēnembenayyā, kalidēvaradēva?