Index   ವಚನ - 269    Search  
 
ಮಾಚಿತಂದೆಯ ಕೈಯಲಾಗದು. ಹೋಚಿತಂದೆಯ ಕೈಯಲಾಗದು. ಇಚ್ಫೆಗೆಟ್ಟಂತೆ ಇರಲಾಗದು. ಅಚ್ಚೊತ್ತಿದಂತೆ ಇರಬೇಕು ಅತಿಚೋದ್ಯವಾಗಿ. ಎಚ್ಚರಿಕೆಯ ಮುಚ್ಚುಮರಹಿಲ್ಲದೆ ಬೆಚ್ಚಂತಿರಬೇಕು. ಮಚ್ಚು ಪಲ್ಲಟವಾಗದೆ ಅಚ್ಚರಿಯ ಭಕ್ತಿಭರಿತನಾಗಿರಬೇಕು. ಕಲಿ ಕರುಳನೊತ್ತಿ ಮುಂದಕ್ಕೆ ನಡೆವನಲ್ಲದೆ, ಎಡೆಗೋಲನಾಸೆ ಮಾಡುವನೆ ಹೇಳಾ? ಕಲಿದೇವರದೇವನ ಅಂಕೆಗೆ ಝಂಕೆಗೆ, ಬೆಚ್ಚಿ ಬೆದರಿ ಓಡದಿರು. ವೀರಕಂಕಣವ ಕಟ್ಟಾ, ಸಂಗನಬಸವಣ್ಣ.