Index   ವಚನ - 282    Search  
 
ಲಿಂಗ ಬೆರಗಿನ ಪರಮಸುಖಿಯನೇನೆಂಬೆನಯ್ಯಾ! ಕಂಗಳ ಕಳೆಯ ಸಂಗವನಗಲಿದ, ಅಂಗವಿರಹಿತನನೇಂದುಪಮಿಸುವೆ! ನೋಟದಲ್ಲಿ ಅನಿಮಿಷ, ಕೂಟದಲ್ಲಿ ನಿಸ್ಸಂಗಿ, ಎಡೆಯಾಟದಲ್ಲಿ ನಿರ್ಗಮನ, ನಿಂದಲ್ಲಿ ನಿರಾಳ, ಸುಳಿದಲ್ಲಿ ಪರಿಪೂರ್ಣ, ಘನಕ್ಕೆ ಘನಮಹಿಮ. ಕಲಿದೇವಾ, ನಿಮ್ಮ ಶರಣ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.