Index   ವಚನ - 297    Search  
 
ವೇಷವ ಹೊತ್ತವರ, ಬಿಟ್ಟಿಯ ಹೊತ್ತವರೆಂಬೆ. ಪಸರನಿಕ್ಕುವರ ಕಂಚಗಾರರೆಂಬೆ. ಲಿಂಗವ ತೋರಿ ಉಂಬವರ ಬಂಗಾರರೆಂಬೆ. ಒಡಂಬಟ್ಟ ಬೆವಹಾರವ ಲಾಭವಾಗಿ ಬದುಕುವ, ಫಲದಾಯರೆಲ್ಲರೂ ಧರ್ಮ ಕಾಮ ಮೋಕ್ಷದಲ್ಲಿ ಸಿಕ್ಕಿದರೆಂಬೆ. ಅಲ್ಲಿಂದತ್ತ ನಿಮ್ಮ ಶ್ರೀಚರಣದ ಸೇವೆಯ ಮಾಡುವ, ಲಿಂಗನಿಷ್ಠೆ ನಿಜೈಕ್ಯರ ಕರೆದು ಎನಗೆ ತೋರಾ, ಕಲಿದೇವಯ್ಯ.