Index   ವಚನ - 301    Search  
 
ಶರಣಂಗೆ ಕಟ್ಟಿದಿರ ಕರ್ಪುರ ಜ್ಯೋತಿಯಂತೆ, ಸಚರಾಚರ ಸಂಭ್ರಮ ಸೂತಕ ಪಾತಕವೆಂಬ ಘೋಷಣೆಗಳು ಹುಟ್ಟದಂದು, ದೇವಲೋಕ ಮರ್ತ್ಯಲೋಕ ನಾಗಲೋಕ ಹುಟ್ಟದಂದು, ಹುಟ್ಟಿಸುವಾಗ ಕರೆಸದರವೆಯೆನ್ನಾಧಾರಪಥ, ಪಲ್ಲವಿಸಿ ಗರ್ಭವಾಯಿತ್ತೆಂದು. ಮಹಾದೇವಂಗೆ ದೇವಗಣಂಗಳು ಬಿನ್ನಹಂ ಮಾಡುವಲ್ಲಿ, ಪ್ರಾಣ ಗರ್ಭಿತರುಂಟೆ? ಅತಿಥರುಂಟೆ? ಕ್ಷೀರಸಾಗರದ ನಡುವೆ ಜವುಳು ನೀರುಂಟೆ? ಸಂವಿತ್ತು ಸಿಂಹಾಸನದ ಮೇಲೆ ಕಂದನೈದಾನೆ. ಇಂದು ಶಿವನು ಶಕ್ತಿಯ ಕೂಡಿಯಾಳಾಪವೊಕ್ಕನು ಕಾಣಾ. ಕಾರುಣ್ಯದ ವಾಹನವನೇರಿಕೊಂಡು, ಅಷ್ಟಗುಣವಿರಹಿತನು, ತ್ರಿವಿಧಗುಣ ನಷ್ಟನು, ಸದ್ಗುಣ ಸಿಂಹಾಸನನು ಸಪ್ತಸ್ವರಹಾರದೊಳು, ಘನದೇಹಾರದೊಳು ಹೇಳುವೆ. ಎನ್ನೊಡೆಯ ಬಂದುದ ಕಂಡು ಬಲವಿಡಿದೆ, ದೃಢವಿಡಿದೆ, ಜ್ಞಾನವಿಡಿದೆ, ಕಲಿದೇವಾ, ನಿಮ್ಮ ಬಸವನಡಿವಿಡಿದು ಘನವಾದೆ. ನಮೋ ನಮೋ ಎಂಬೆ ನಿಮ್ಮ ಸಂಗನಬಸವಣ್ಣಂಗೆ.