Index   ವಚನ - 303    Search  
 
ಶರಣು ಶರಣು ಎನ್ನ ಬಿನ್ನಪವನಧರಿಸಯ್ಯಾ. ಬಸವಣ್ಣನೆ ಗುರುರೂಪಾಗಿ ಮರ್ತ್ಯಕ್ಕೆ ಬಂದ. ಚೆನ್ನಬಸವಣ್ಣನೆ ಲಿಂಗರೂಪಾಗಿ ಮರ್ತ್ಯಕ್ಕೆ ಬಂದ. ಪ್ರಭುವೆ ನೀವು ಜಂಗಮರೂಪಾಗಿ ಮರ್ತ್ಯಕ್ಕೆ ಬಂದಿರಿ. ಭಕ್ತಿಯ ಬೆಳವಿಗೆಗೆ ಬಸವಣ್ಣನೆ ಕಾರಣಿಕನಾದ. ಅರಿವಿನ ಬೆಳವಿಗೆಗೆ ಚೆನ್ನಬಸವಣ್ಣನೆ ಕಾರಣಿಕನಾದ. ಈ ಇಬ್ಬರನೂ ಒಳಗೊಂಬ ಮಹಾಘನಕ್ಕೆ ನೀವು ಕಾರಣಿಕರಾದಿರಿ. ಇಂತು ಗುರುಲಿಂಗಜಂಗಮವೊಂದೆ ಭಾವವಲ್ಲದೆ ಭಿನ್ನಭಾವವುಂಟೆ? ಬಸವಣ್ಣ ಚೆನ್ನಬಸವಣ್ಣನ ಬಿನ್ನಪವ ಮೀರದೆ, ಬಿಜಯಂಗೆಯ್ವುದಯ್ಯಾ ಕಲಿದೇವರದೇವ.