Index   ವಚನ - 306    Search  
 
ಶಿವನೊಡ್ಡಿದ ಮಾಯಾಗುಣದಿಂದ ತನ್ನ ತಾನರಿಯದೆ, ಅಜ್ಞಾನದಿಂದ ಎಂಬತ್ತನಾಲ್ಕುಲಕ್ಷ ಜೀವರಾಶಿಗಳ ಯೋನಿಯಲ್ಲಿ ಹುಟ್ಟಿ ಹುಟ್ಟಿ, ಶಿವಕಾರುಣ್ಯದಿಂದ ಮನುಷ್ಯಜನ್ಮಕ್ಕೆ ಬಂದು, ಆ ಮನುಷ್ಯಜನ್ಮದೊಳಗಧಿಕವಾದ ಶಿವಭಕ್ತಿಯ ಪಡೆದು, ಆ ಶಿವಭಕ್ತಿಯ ನೆಮ್ಮಿ ಸತ್ಯಸದಾಚಾರವಿಡಿದು ನಡೆದು. ಏಕಲಿಂಗನಿಷ್ಠೆಯಿಂದ ತನ್ನ ಕಷ್ಟ ಭವಂಗಳ ಗೆಲದಿರ್ದಡೆ, ಮೆಟ್ಟುವ ನರಕದೊಳಗೆ, ಕಲಿದೇವಯ್ಯ.