Index   ವಚನ - 320    Search  
 
ಸನ್ಮಾರ್ಗದ ವಿಚಾರವ ಸದ್ಗುರು ಮುಖದಿಂ ತಿಳಿದು, ತನ್ನಂತರಂಗ ಬಹಿರಂಗದ ಸಂದುಸಂಶಯವ ಪರಿಹರಿಸಿ, ನಿಶ್ಚಿಂತನಾಗಿ ನಿಜದಲ್ಲಿ ನಿಂದು, ಲಿಂಗಕ್ಕಾಚಾರವ ಸಂಬಂಧಿಸಿ, ಮನಕ್ಕೆ ಅರಿವಿನಾಚರಣೆಯ ನೆಲೆಗೊಳಿಸಿ, ಆತ್ಮಂಗೆ ಸತ್ಕ್ರಿಯಾ ಸಮ್ಯಕ್‍ಜ್ಞಾನವ ಬೋಧಿಸಿ, ಪ್ರಾಣಕ್ಕೆ ಲಿಂಗಮಂತ್ರಧಾರಣವ ಮಾಡಿ, ಜೀವ ಪರಮರಿಗೆ ಚಿದ್ಘನಪಾದೋದಕಸಾದಭೋಗವನಿತ್ತು, ಅವಕ್ಕೆ ತಾನಾಶ್ರಯನಾಗಿ, ತನ್ನ ನಿಜದಲ್ಲಿ ನಿಂದು ನೋಡಬಲ್ಲಾತನೆ ಶಿವಯೋಗಿ ನೋಡಾ, ಕಲಿದೇವರದೇವ