Index   ವಚನ - 324    Search  
 
ಸೂಳೆ ಸುರೆ ಬೆಕ್ಕು ನಾಯಿ ಅನ್ಯದೈವ ತಾಳಹಣ್ಣು ಇಷ್ಟುಳ್ಳನ್ನಕ್ಕರ ಅವ ಭಕ್ತನೆ? ಅಲ್ಲ ಅಲ್ಲ. ಅವ ಶಿವದ್ರೋಹಿ, ಅವ ಗುರುದ್ರೋಹಿ. ಹಂದಿ ಹಂದಿಯ ಹೇಲ ತಿಂದು, ಒಂದರ ಮೋರೆಯನೊಂದು ಮೂಸಿ ನೋಡುವಂತೆ ಕಾಣಾ, ಕಲಿದೇವರದೇವ.