Index   ವಚನ - 334    Search  
 
ಹಸಿವು ತೃಷೆ ವ್ಯಸನಕ್ಕೆ ಕುದಿ ಕುದಿದು ಸಚರಾಚರದೊಳಗೆಲ್ಲ ಲಯವಾಗಿ ಹೋದರಲ್ಲ. ಉದರವ ಹೊರೆವ ಕೋಟಿವೇಷಧಾರಿಗಳೆಲ್ಲ ಜಂಗಮವಪ್ಪರೇ? ಅಲ್ಲ. ಲಿಂಗಸ್ಥಲವನರಿಯರು, ಜಂಗಮಸ್ಥಲವನರಿಯರು, ಪ್ರಸಾದಿಸ್ಥಲವನರಿಯರು. ಇಂತೀ ತ್ರಿವಿಧ ಸ್ಥಲವನರಿಯದ ಕಾರಣಾ ಅವರ ಗಾವಿಲರ ಮಕ್ಕಳೆಂಬೆ, ಕಲಿದೇವರದೇವಾ