Index   ವಚನ - 18    Search  
 
ಘನಲಿಂಗ, ಅತೀತ, ವಿರಕ್ತಿ-ಈ ಮೂರು ಒಂದಾಗಿ ಭವತಿಭಿಕ್ಷವ ಕೈಕೊಂಡು ಉಂಡು ಉಪವಾಸಿ ಆಗಿ, ಬಳಸಿ ಬ್ರಹ್ಮಚಾರಿ ಆಗಿ, ತತ್ತ್ವಮಂತ್ರೋಪದೇಶವ ಪಸರಿಸಿ, ಆಚಾರ ಹೆಚ್ಚುಗೊಳಿಸಿ, ನಿಷ್ಠೆಯೊಳಗಿರ್ದು, ಕಷ್ಟನಿಷ್ಠುರವನಳಿದು ಸೃಷ್ಟಿಗೆ ಮಿಗಿಲೆನಿಸಿಕೊಂಡು ಜಗವಾದ ಬಗೆಯ ಅರಿಯದೆ ಬಗೆತಗಿಗೆ ಈಡಾಗಿ ನಗನಗುತಾ ಸತ್ತುಹೋಯಿತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.