Index   ವಚನ - 38    Search  
 
ಅದೇ ಅದೇ ಎಂಬಲ್ಲಿ, ಇದು ಎಂಬುದುಂಟೆ? ಅದು ಎಂದರೆ ವಸ್ತು, ಇದು ಅಂದರೆ ಅರಿವು. ಇದು ಹೋದ ಮ್ಯಾಲೆ ಅದು ಇರಲಿಲ್ಲಾ. ಕರ್ಪುರಕ್ಕೆ ಹತ್ತಿ ಉರಿವ ಉರಿ, ಆ ಕರ್ಪುರವು ಕರಗಿ ಹೋದ ಮೇಲೆ ಆ ಉರಿಯು ಏನಾಯಿತೊ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ?