Index   ವಚನ - 46    Search  
 
ಚಿತ್ತೆಂಬೊ ಬಿತ್ತುವಡೆದು, ಕಳೆಯೆಂಬೋ ಮೊಳಕೆ ಹುಟ್ಟಿ, ಮಾಯವೆಂಬೋ ವೃಕ್ಷವಾಯಿತ್ತು. ಆ ವೃಕ್ಷದಲ್ಲಿ ಹಲವು ಶಾಖೆ, ಹಲವು ಎಲೆ, ಹಲವು ಪುಷ್ಪ, ಹಲವು ಕಾಯಿ, ಹಲವು ಸವಿ, ಹಲವು ಬೀಜ, ಹಲವು ಫಲವಾಯಿತಲ್ಲದೆ, ನಾನೆಂಬುದೇನು? ನೀನೆಂಬುದೇನು? ತಾನೆಂಬುದೇನು? ಏನೆಂಬುದೇನು? ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.