ಅಗ್ಘವಣಿಗಡಿವಜ್ಜೆಯುಂಟೆ ?
ವಾಯುವ ಹಿಡಿದು ಬಂಧಿಸಬಹುದೆ ?
ಅನಲಂಗೆ ತಾಳು ತುದಿ ಸುಡುವುದಕ್ಕೆ ಬೇರೆ ಭಿನ್ನವುಂಟೆ ?
ಸುಗಂಧಕ್ಕೆ ಬುಡ ತುದಿಯಿಲ್ಲ.
ಅರ್ಕೇಶ್ವರಲಿಂಗವನರಿದುದಕ್ಕೆ ಎಲ್ಲಿಯೂ ತಾನೆ.
Art
Manuscript
Music
Courtesy:
Transliteration
Agghavaṇigaḍivajjeyuṇṭe?
Vāyuva hiḍidu bandhisabahude?
Analaṅge tāḷu tudi suḍuvudakke bēre bhinnavuṇṭe?
Sugandhakke buḍa tudiyilla.
Arkēśvaraliṅgavanaridudakke elliyū tāne.