Index   ವಚನ - 65    Search  
 
ಪೂಜಿಸಿಕೊಂಡೆಹೆವೆಂದು, ಘನಗಂಭೀರದಲ್ಲಿ ರಾಗಿಸಿಕೊಂಡಿಪ್ಪ ಆತ್ಮ ತೇಜದ ಮಾತಿನ ವೇಷದ ಗರ್ವಿಗಳು, ಆಡುವ ವಾಚಕ, ಭೇಕನ ಬಾಯಲ್ಲಿ ಸಿಕ್ಕಿದ ಮಕ್ಷಿಕ, ಶ್ರೋಣಿತದಾಸೆಗೆ ಮಚ್ಚಿದಂತೆ. ಮತ್ತುಂಟೆ ಅರ್ಕೇಶ್ವರಲಿಂಗನ ಕೂಟ ?