Index   ವಚನ - 94    Search  
 
ವನದ ಬಾಳೆಯ ಗೊನೆಯ ಹೊಯಿದ ಕಳ್ಳನ ಅಡಿವಜ್ಜೆಯಲ್ಲಿ ಹೋಗಿ, ಹೆಡಗುಡಿಯ ಕಟ್ಟಿ, ಬಾಧಿಸಿ, ಗೊನೆಯ ತೋರೆಂದಡೆ, ಗೊನೆ ಮನೆಯೊಳಗದೆಯೆಂದ. ಮನೆಯಾಕೆಯ ಕೇಳಿದಡೆ, ಗೊನೆಯ ನಾ ತಿಂದೆ, ಕಳ್ಳನ ತಲೆಯ ಕುಟ್ಟಿ, ಎನ್ನದು ಕೊಯಿದುಕೊಳ್ಳಿಯೆಂದಳು, ಅರ್ಕೇಶ್ವರಲಿಂಗವ ಬಲ್ಲಡೆ.