Index   ವಚನ - 9    Search  
 
ಈ ವಚನ ಉದ್ದೇಶ ಲಕ್ಷಣ ಪರೀಕ್ಷೆ ಮೂರು ತೆರನು: ಆಡು[ಹ]ಲ್ಲ ತಿಂಬಲ್ಲಿ, ಕೋಡಗ ನೋಡಿ ಬಾಲವ ತಿಂದಿತ್ತು. ಕೋಡಗದ ದಾಡೆ ಆಡುವಾಗ ಬಳ್ಳು ಮಾತಾಡಿದುದಿಲ್ಲ. ಗೊಲ್ಲನ ಬಿಲ್ಲ ಕೊಪ್ಪ ಕಂಡು, ಆ ಬಳ್ಳು ತನಗೆ ಇಲ್ಲಿ ಇಲ್ಲವೆಂದು, ಎಲ್ಲಿ ಅಡಗಿತ್ತೆಂದರಿಯೆ. ಅದರ ಅಡಿವಜ್ಜೆಯ ತೋರು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.