Index   ವಚನ - 27    Search  
 
ಗಿರಿಯ ಗುಹೆಯಲ್ಲಿ ಒಂದು ಅರಿಬಿರಿದಿನ ಹುಲಿ. ಹುಲ್ಲೆಯ ಭಯಕಾಗಿ ಎಲ್ಲಿಯೂ ಹೊರಡಲಮ್ಮದೆ ಅಲ್ಲಿ ಅದೆ. ಅದ ಮೆಲ್ಲನೆ ನೋಡಿ ಬಿಲ್ಲಂಬಿನಲ್ಲಿ ಎಸೆಯೆ, ಹುಲಿ ಹಾರಿ ಹುಲ್ಲೆಯಾಯಿತ್ತು. ಆ ಹುಲ್ಲೆ ಬಲೆಯೊಳಗಲ್ಲ, ಬಾಣದೊಳಗಲ್ಲ, ಎಲ್ಲಿಯೂ ಸಿಕ್ಕದು. ಇದ ಬಲ್ಲವರಾರು ? ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ತಿರುಗುವ ಭರಿತನು.