Index   ವಚನ - 35    Search  
 
ವಾರಿಯ ಶಿಲೆ ಕರಗುವುದಲ್ಲದೆ ಒಡೆದುದುಂಟೆ ಅಯ್ಯಾ? ಹೇಮದ ಬಣ್ಣ ಪಾವಕನ ಜ್ವಾಲೆಗಂಜುವುದೆ? ವಿಶಾಲ ಸಂಪದ ಕಾಲನ ಕಮ್ಮಟಕ್ಕೆ ಲೋಲನಹನೆ? ಇದನರಿಯದ ಬಾಲರ ಮಾತೇಕೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ?