ವಟವೃಕ್ಷದ ಘಟದ ಹೊಟ್ಟೆಯಲ್ಲಿ ತತ್ತಿಯನಿಕ್ಕಿತ್ತೊಂದು ಗಿಳಿ.
ತತ್ತಿ ಮೂರು, ಆ ತತ್ತಿಗೆ ಪಕ್ಷಿ ಮೂರು.
ಕಂಡನೊಬ್ಬ ಅಂಧಕ. ವೃಕ್ಷವ ಹತ್ತುವುದಕ್ಕೆ ಮೆಟ್ಟಿಲ್ಲ.
ಹೊಟ್ಟೆಯಲ್ಲಿ ಇಕ್ಕುವುದಕ್ಕೆ ಕೈಯಿಲ್ಲ.
ಗಿಳಿಯಾಸೆ ಬಿಡದು. ಇದಿರಾಸೆಯ ಬಿಡಿಸು,
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
Art
Manuscript
Music
Courtesy:
Transliteration
Vaṭavr̥kṣada ghaṭada hoṭṭeyalli tattiyanikkittondu giḷi.
Tatti mūru, ā tattige pakṣi mūru.
Kaṇḍanobba andhaka. Vr̥kṣava hattuvudakke meṭṭilla.
Hoṭṭeyalli ikkuvudakke kaiyilla.
Giḷiyāse biḍadu. Idirāseya biḍisu,
guḍiya gum'maṭanoḍeya agamyēśvaraliṅga.