Index   ವಚನ - 52    Search  
 
ಗುಹೆಯೆಂದಡೂ ಅಂಗ, ಗುಮ್ಮೆಂದಡೂ ಅಂಗ. ಈಶ್ವರನೆಂದಡೂ ತಾ, ಮಟವೆಂದಡೂ ತಾ, ಎನಗೊಂದು ಕುರುಹಿಲ್ಲವಾಗಿ. ಅಗಮ್ಯೇಶ್ವರಲಿಂಗವೆ ಗುಡಿಯೊಡೆಯನಾಗಿ ಗುಮ್ಮಟಂಗೆ ಈಡಿಲ್ಲ.