ನೋಡುವ ನಯನ ತೆರಪಾದಡೇನು,
ಆಡುವ ಬೊಂಬೆಯಿಲ್ಲದ ಮತ್ತೆ?
ಗಾಡದ ಘಟ ಇದ್ದಡೇನು, ಮಾತಾಡುವ ಆತ್ಮನಿಲ್ಲದಂತೆ.
ರೂಢಿಯಲ್ಲಿ ಬೋಧಕರಿದ್ದಡೇನು,
ನಿಗಮಗೋಚರನ ವೇದಿಸಬೇಕು.
ಇದು ಬೋಧಕ ಗುರುವಿನ ಅರಿವು, ಇದು ಸಿದ್ಧ.
ಗುಡಿಯ ಗುಮ್ಮಟನಾಥನ ಒಡೆಯ
ಅಗಮ್ಯೇಶ್ವರಲಿಂಗದಲ್ಲಿ ಗುರುನಿರ್ವಾಣಸ್ಥಲ.
Art
Manuscript
Music
Courtesy:
Transliteration
Nōḍuva nayana terapādaḍēnu,
āḍuva bombeyillada matte?
Gāḍada ghaṭa iddaḍēnu, mātāḍuva ātmanilladante.
Rūḍhiyalli bōdhakariddaḍēnu,
nigamagōcarana vēdisabēku.
Idu bōdhaka guruvina arivu, idu sid'dha.
Guḍiya gum'maṭanāthana oḍeya
agamyēśvaraliṅgadalli gurunirvāṇasthala.