ತಟಾಕ ಒಡೆದಡೆ ಪ್ರತಿಶಬ್ದವಲ್ಲದೆ ಗತಿಭಿನ್ನವುಂಟೆ?
ಅಂಬುಧಿಗೆ ಅದು ತುಂಬಿದ ಸಂಪದ,
ಅದರಂಗದ ಇರವು, ಲಿಂಗಾಂಗಿಯ ಭಾವದ ಸಂಗ.
ಕಂಡುದ ಕಂಡು ಕಾಳ್ಗೆಡೆವ ಲಿಂಗಿಗಳಿಗುಂಟೆ,
ಗುಡಿಯೊಡೆಯ ಗುಮ್ಮಟನಾಥನ
ಅಗಮ್ಯೇಶ್ವರಲಿಂಗದ ಸಂಗದ ಸುಖವು?
Art
Manuscript
Music
Courtesy:
Transliteration
Taṭāka oḍedaḍe pratiśabdavallade gatibhinnavuṇṭe?
Ambudhige adu tumbida sampada,
adaraṅgada iravu, liṅgāṅgiya bhāvada saṅga.
Kaṇḍuda kaṇḍu kāḷgeḍeva liṅgigaḷiguṇṭe,
guḍiyoḍeya gum'maṭanāthana
agamyēśvaraliṅgada saṅgada sukhavu?