ಏಕಬೀಜಂ ಸಮಾವೃಕ್ಷಂ ಲೋಕ ಲಿಂಗಂತು ಪೂಜನಂ
ಸಾಕಾರಂ ಚ ಗುರೋರ್ಲಿಂಗಂ ಏಕಲಿಂಗಂತು ಪೂಜನಂ
ಏಕಧ್ಯಾನ ಸಮಂ ಚಿತ್ತಂ ಊರ್ಧ್ವಲಿಂಗಂತು ಪೂಜನಂ
ಏಕಾಕ್ಷರಂ ತುಷಂ ಜನಂ ಮಹಾಲಿಂಗಂತು ದರುಶನಂ ||
ಇಂತೆಂದುದಾಗಿ,
ಇದು ಕಾರಣ, ನಿಮ್ಮ ಶರಣ ಬಸವಣ್ಣನನು
ಲೋಕದವರು ಮರ್ತ್ಯರೆಂದಡೆ, ಅಘೋರ [ನರಕ ]ತಪ್ಪದು ಕಾಣಾ,
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನಯ್ಯಾ.
ನಿಮ್ಮ ಶರಣ ಬಸವಣ್ಣನ ಪರಿಯ, ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.