ಧರೆಯ ಮೇಲೆ ಸುಳಿವ ಅರುಹಿರಿಯರೆಲ್ಲರು
ಪರಬ್ರಹ್ಮವ ನುಡಿದು ಕೆಟ್ಟರಲ್ಲಾ.
ಈ ದುರುಳತನದ ಮಾತು ನಿಮಗೇಕೆ ಹೇಳಿರಣ್ಣಾ.
ಗುರುವಿನ ಕರುಣದಿಂದ ಗುರುಕರುಣಾಮೃತರಸವ
ಕರೆದೆರದುಂಬಾತಂಗೆ ಕುರುಹಿಲ್ಲವಣ್ಣಾ.
ಇದ ಕರೆದುಂಬಾತನು ಕುರುಹುಗೆಟ್ಟುಹೋದನು.
ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ,
ಇದರ ಸಕೀಲವ ಬಲ್ಲ ಶರಣನ ಪರಿಯ ನೀವೇ ಬಲ್ಲಿರಲ್ಲದೆ
ನಾನೆತ್ತ ಬಲ್ಲೆನಯ್ಯಾ
,ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.