ಅಯ್ಯಾ, ಅಸ್ಥಿ ಚರ್ಮ ಮಾಂಸ ಶುಕ್ಲ ಶೋಣಿತದ ಗುಡಿಯ ಕಟ್ಟಿ,
ಹಂದಿಯ ದೇವರ ಮಾಡಿ ಕುಳ್ಳಿರಿಸಿ,
ಪಾದರಕ್ಷೆಯ ಪೂಜೆಯ ಮಾಡಿ
ನೈವೇದ್ಯವ ಹಿಡಿದು, ಮೂತ್ರದ ನೀರ ಕುಡಿಸಿ,
ಶ್ವಾನ ಕುಕ್ಕುಟನಂತೆ ಕೂಗಿ ಬೊಗುಳಿ,
ದಡದಡ ನೆಲಕ್ಕೆ ಬಿದ್ದು ಕಾಡಿ ಬೇಡಿಕೊಂಡರೆ
ಆ ದೇವರ ಒಡೆಯ ಮಾರೇಶ್ವರ
ಖಂಡ ಹೆಂಡ ಕೊಡುವನಲ್ಲದೆ ಅನ್ನ ನೀರು ಕೊಡುವನೆ?
ಆ ದೇವರಿಗೆ ಹೊಲೆಯರು ಮೆಚ್ಚುವರಲ್ಲದೆ,
ಉತ್ತಮರು ಮೆಚ್ಚರು ನೋಡಯ್ಯ,
ಮಸಣಯ್ಯಪ್ರಿಯ ಮಾರೇಶ್ವರಲಿಂಗವೆ.