ಓಂ' ಎಂದು ವೇದವನೋದುವ
ಮಾದಿಗಂಗೆ ಸಾಧ್ಯವಾಗದು ವಿಭೂತಿ.
ಪುರಾಣವನೋದುವ ಪುಂಡರಿಗೆ
ಸಾಧ್ಯವಾಗದು ವಿಭೂತಿ.
ಶಾಸ್ತ್ರವನೋದುವ ಸಂತೆಯ
ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ.
ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ
ಸಾಧ್ಯವಾಗದು ವಿಭೂತಿ.
ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು,
ಅಗ್ಛಣಿಯ ನೀಡಿ ಗುಣಮರ್ದನೆಯ ಮಾಡಿ
ಲಿಂಗ ಉಚ್ಛಿಷ್ಠನಂಗೈದು, ಲಿಂಗ ಸಮರ್ಪಣಂಗೈದು,
ಷಡಕ್ಷರಿಯ ಸ್ಮರೆಣೆಯಂಗೈದು,
ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು
ಹಸ್ತವ ಪ್ರಕ್ಷಾಲಿಸುವವ ಲಿಂಗದ್ರೋಹಿ ಜಂಗಮದ್ರೋಹಿ.
ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ
ಪಾತಕರ ಮುಖವ ನೋಡಲಾಗದು.
ಶ್ರೀವಿಭೂತಿಯನು ಶಿವನೆಂದು ಧರಿಸುವುದು,
ಪರಶಿವನು ತಾನೆಂದು ಧರಿಸುವುದು.
ಸಾಕ್ಷಿ: ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ
ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ
ಶ್ರಿವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ
ದೇವಲೋಕ ಮರ್ತ್ಯಲೋಕಕ್ಕೆ ಸಲ್ಲದೆಂದುದಾಗಿ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ
ಕಾಣಾ ಸಂಗನಬಸವಣ್ಣ.
Transliteration Ōṁ' endu vēdavanōduva
mādigaṅge sādhyavāgadu vibhūti.
Purāṇavanōduva puṇḍarige
sādhyavāgadu vibhūti.
Śāstravanōduva santeya
sūḷemakkaḷige sādhyavāgadu vibhūti.
Aṅgaliṅgasambandhavanarida śivajñānigaḷigallade
sādhyavāgadu vibhūti.
Aṅgaiyoḷage vibhūtiyanirisikoṇḍu,
agchaṇiya nīḍi guṇamardaneya māḍi
liṅga ucchiṣṭhanaṅgaidu, liṅga samarpaṇaṅgaidu,
ṣaḍakṣariya smareṇeyaṅgaidu,Bhāḷadoḷu paṭṭavaṁ kaṭṭi, vibhūtiya dhāraṇaṅgaidu
hastava prakṣālisuvava liṅgadrōhi jaṅgamadrōhi.
Śrīvibhūtiya lalāṭakke dharisi hastava toḷeva
pātakara mukhava nōḍalāgadu.
Śrīvibhūtiyanu śivanendu dharisuvudu,
paraśivanu tānendu dharisuvudu.
Sākṣi: Kr̥tvēva jalamiśrantu samudhr̥tyaṣaḍakṣari
dhārayēt tripuṇḍrantu mantrēṇa mantritaṁ
śrivibhūtiya dharisi hastava toḷadātaṅge
dēvalōka martyalōkakke salladendudāgi
nim'māṇe nim'ma pramatharāṇe,
nam'ma guhēśvaraliṅgavu tānāda vibhūti
kāṇā saṅganabasavaṇṇa.
Hindi Translation ‘ऊँ’ कहे वेद पढनेवाले चमार को साध्य नहीं होती विभूति ।
पुराण पढनेवाले नीच को साध्य नहीं होती विभूति ।
शास्त्र पढनेवाले बाजार वेश्यापुत्र को साध्य नहीं होती विभूति ।
अंगलिंग संबंध जाने शिवज्ञानी के बिना
दूसरों को साध्य नहीं होती विभूति ।
हथेली में विभूति रखकर ,
पवित्रजल देकर गुण मर्दन कर
लिंग जूठन कर ? लिंग समर्पण कर ,
षडक्षरी मंत्र स्मरण कर
माथे पर पगडी बांधकर ,विभूति धारण कर
हस्त धोनेवाले गुरुद्रोही,लिंगद्रोही,जंगम द्रोही ।
श्री विभूति ललाट पर धारण कर हाथ धोनेवाले
पातकियों का मुख न देखना ।
श्री विभूति को शिव समझ धारण करना ,
परशिव खुद समझे धारण करना ,
साक्षी-“कृत्वेव जलमिश्रंतु समुधृत्य षडक्षरी ।
धारयेत् त्रिपुंड्रंतु मंत्रेण मंत्रित ” ॥
श्री विभूति धारण कर हस्त धोनेवाले को
देवलोक मर्त्यलोक न मिलता –कहे
तुमारी कसम, तुमारे प्रमथों की कसम,
हमारे गुहेश्वर लिंग खुद विभूति देख संगनबसवण्णा ।
Translated by: Eswara Sharma M and Govindarao B N