•  
  •  
  •  
  •  
Index   ವಚನ - 1037    Search  
 
ಕಡೆನಾಡಲಿಂಗವ ನಡುನಾಡಿಗೆ ತಂದೆನೆಂಬ ಅಹಂಕಾರವ ಮುಂದುಗೊಂಡಿದ್ದೆಯಲ್ಲಾ. ಎಂಬತ್ತುನಾಲ್ಕುಲಕ್ಷ ಶಿವಾಲಯವೆಂಬ ಬಯಲಭ್ರಮೆ ಇದೆಲ್ಲಿಯದು ಹೇಳಾ? ಮಹಾಘನಲಿಂಗಕ್ಕೆ ಜಗದ ಜೀವರಾಶಿಗಳು ಶಿವಾಲಯವಾಗಬಲ್ಲವೆ? ನಿನ್ನ ಲಕ್ಷದ ಮೇಲೆ ತೊಂಬತ್ತಾರುಸಾವಿರ ಲಿಂಗವ ನಿನ್ನ ಎದೆಯಲ್ಲಿ ಇರಿದುಕೊಳ್ಳಾ. ಗುಹೇಶ್ವರಲಿಂಗವು ನಿನ್ನ ತಪ್ಪಿಸಿ ಹೋದುದ ಮರೆದೆಯಲ್ಲಾ ಮರುಳ ಸಿದ್ಧರಾಮಯ್ಯಾ.
Transliteration Kaḍenāḍaliṅgava naḍunāḍige tandenemba ahaṅkārava mundugoṇḍiddeyallā. Embattunālkulakṣa śivālayavemba bayalabhrame idelliyadu hēḷā? Mahāghanaliṅgakke jagada jīvarāśigaḷu śivālayavāgaballave? Ninna lakṣada mēle tombattārusāvira liṅgava ninna edeyalli iridukoḷḷā. Guhēśvaraliṅgavu ninna tappisi hōduda maredeyallā maruḷa sid'dharāmayyā.
Hindi Translation दूर रहे लिंग बीच गाँव में लाये जैसे अहंकार धारण कर चुके हो, चौरासी लाख शिवालय जैसी शून्य भ्रमा कहाँ की है कहो ? महाघनलिंग को जगत के जीवराशी शिवालय बन सकते ? तेरे लाख पर छियानबे हजार लिंगों को तेरी छाती में रखो | गुहेश्वर लिंग तुझसे बचाकर गया भूल गये न पागल सिद्धरामय्या | Translated by: Eswara Sharma M and Govindarao B N