Index   ವಚನ - 1038    Search  
 
ಕಡೆಯಿಲ್ಲದ ದೇಶವ ತಿರುಗಿದೆನು, ಹವಣಿಲ್ಲದ ಕಂಥೆಯ ತೊಟ್ಟೆನು, ಹಸಿವಿಲ್ಲದ ಕಪ್ಪರವ ಹಿಡಿದು ಭಕ್ತಿಭಿಕ್ಷವ ಬೇಡ ಬಂದೆನು. ಗುಹೇಶ್ವರ ಹಸಿದನು, ಉಣಲಿಕ್ಕು ಏಳಾ ಸಂಗನಬಸವಣ್ಣಾ.