ಕೆಟ್ಟ ಒಡವೆಯನರಸ ಹೋಗಿ,
ಆ ಕೆಟ್ಟ ಒಡವೆಯ ಕಂಡ ಬಳಿಕ,
ಆರನೂ ಕೇಳಲಿಲ್ಲ ಹೇಳಲಿಲ್ಲ,
ಅದು ಮುನ್ನಲಿದ್ದ ಹಾಂಗೆ ಆಯಿತ್ತು.
ಅಂತು ಶರಣನು ಆ ಪರಿಯಲೆ
ತನ್ನ ಸ್ವಯಾನುಭಾವದಿಂದ
ತನ್ನ ನಿಜವ ತಾ ಕಂಡು ಸೈವೆರಗಾಗಿರಲು,
ಅದನ್ನು ಅಜ್ಞಾನಿಗಳು ಬಲ್ಲರೆ ಗುಹೇಶ್ವರಾ?
Transliteration Keṭṭa oḍaveyanarasa hōgi,
ā keṭṭa oḍaveya kaṇḍa baḷika,
āranū kēḷalilla hēḷalilla,
adu munnalidda hāṅge āyittu.
Antu śaraṇanu ā pariyale
tanna svayānubhāvadinda
tanna nijava tā kaṇḍu saiveragāgiralu,
adannu ajñānigaḷu ballare guhēśvarā?
Hindi Translation बिगडे आभरणों को ढूँढते जाकर,
उस बिगडे आभरण को देखने के बाद किसी का न सुन,न कह,
वह पहले जैसा ही था।
ऐसे शरण उसी रीति से अपने स्वयानुभाव से
अपना निज आप देख चकित होने से,
उसे अज्ञानी जानते गुहेश्वर ?
Translated by: Eswara Sharma M and Govindarao B N