Index   ವಚನ - 1147    Search  
 
ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ? ವಾಯುವಿನ ಸ್ಥಳವನರಿದವರುಂಟೆ? ಅಂಬುಧಿಯ ಗುಣ್ಪವನಳೆದವರುಂಟೆ? ಲಿಂಗದ ಪ್ರಮಾಣ ಹೇಳಬಹುದೆ? ಚಂದ್ರಮಂಡಲ ತಾರಾಮಂಡಲ ಸೂರ್ಯಮಂಡಲ ಇತ್ತಿತ್ತಲಯ್ಯಾ! ಪಂಚಮುಖವಾಗಿ, ನೊಸಲಕಣ್ಣು ಚತುರ್ಭುಜ ಅಣುಮಾತ್ರವೆ? ಒಬ್ಬ ಶರಣನಾಗಿ ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ ಅಲ್ಲಿಂದತ್ತ ಶರಣು ಶರಣು.