ವಚನ - 1266     
 
ನಡೆದಡೆ ನಿರ್ಗಮನಿ! ಸುಳಿದಡೆ ಗತಿವಿರಹಿತನನು ಏನೆಂಬೆನು? ಎಂತೆಂಬೆನು? ಅಘಟಿತಘಟಿತನನು, ಏನೆಂಬೆನು? ಎಂತೆಂಬೆನು? ಅಖಂಡಿತ ಮಹಿಮನನು ಏನೆಂಬೆನು? ಎಂತೆಂಬೆನು? ಆದಿಯಿಂದತ್ತತ್ತ ಗುಹೇಶ್ವರನ ಶರಣ ಅಲ್ಲಮಯ್ಯನ ಸುಳುಹು ಜಗಕ್ಕೆ ಪಾವನ!