ವಚನ - 1267     
 
ನಡೆ ನುಡಿಯಿಲ್ಲದ ಗುರುವ ಕಂಡು ಉಪದೇಶವ ಪಡೆಯಲೆಂದು ಹೋದಡೆ; ಒಡನೆ ನುಡಿಯನು, ನುಡಿಸಿದಡೆ ಕೇಳನು. ಕಡೆ ಮೊದಲ ಕಾರ್ಯ ಎಂತಪ್ಪುದೊ ಅಯ್ಯಾ? ಮೂಗರ ಮೂಗರ ಪ್ರಸಂಗದಂತೆ ಇದೆ, ಎನ್ನೊಳಗೆ ಅರಿವಿನ ಪರಿಮಳ! ಹೊರಗೆ ನೋಡಿದಡೆ ಮುಗ್ಧವಾಯಿತ್ತು. ಇದನೆಂತು ಉಪಮಿಸುವೆ ಅನಿಯಮದ ಬೆಡಗ? ಇದು ತನ್ನಿಂದ ತಾನಪ್ಪುದಲ್ಲದೆ, ಭಿನ್ನದಲುಂಟೆ ಗುಹೇಶ್ವರಾ?