ಬಂದುದನತಿಗಳೆದು ಬಾರದುದ ಬಯಸೆನೆಂಬುದು
ಒಡಲ ಗುಣಧರ್ಮರಹಿತಂಗಲ್ಲದೆ,
ಒಡಲ ಗುಣಧರ್ಮ ಉಳ್ಳವಂಗೆ ಆಗದು ನೋಡಾ.
ಅದೆಂತೆಂದಡೆ:
ರಾಜಭಯ ಚೋರಭಯ ಮೃಗಭಯ ದೆಸೆಭಯ ಸ್ತ್ರೀಭಯ
ಬಂದು ಸೋಂಕಿದಲ್ಲಿ
ಹೆಚ್ಚು ಕುಂದಿಲ್ಲದೆ ಒಂದೆ ಸಮವಾಗಿ ಕಾಣಬೇಕು.
ಕ್ಷೀರ ಘೃತ ನವರತ್ನ ಆಭರಣ
ಮನೆ ಮಂಚ ಹಸು ಧನ ವನಿತೆಯರ
ಭೋಗಂಗಳು, ಲಿಂಗದಾಣತಿಯಿಂದ ಬಂದವೆಂದು,
ಬಿಡದೆ ಭೋಗಿಸುವ ಅಣ್ಣಗಳು ನೀವು ಕೇಳಿರೊ,
ಮದಸೊಕ್ಕಿದಾನೆ ಪೆರ್ಬುಲಿ ಕಾಳೋರಗ ಮಹಾಜ್ವಾಲೆ
ಅಪ್ರಯತ್ನದಿಂದ ಬಂದು ಸಂಧಿಸೆ,
ಸಂದು ಸಂಶಯವಿಲ್ಲದೆ `ಲಿಂಗದಾಣತಿ' ಎನ್ನದಿದ್ದಡೆ
ಸ್ವಯವಚನ ವಿರುದ್ಧ ನೋಡಾ.
ಇದು ಜೀವಜಾಲಂಗಳ ಉಪಾಧಿಕೆಯಲ್ಲದೆ ನಿರುಪಾಧಿಕೆಯಲ್ಲ.
ಪೇಯಾಪೇಯವನರಿದು ಭೋಗಿಸಬೇಕು.
ಭಯ ಲಜ್ಜೆ ಮೋಹ ಉಳ್ಳನ್ನಕ್ಕರ ಎಂತಪ್ಪುದೊ?
ಇದು ಕಾರಣ-ಅಂಗಕ್ಕಾಚಾರ, ಭಾವಕ್ಕೆ ಕೇವಲ ಜ್ಞಾನ.
ಬಂದಿತ್ತು ಬಾರದು ಎಂಬ ತಥ್ಯಮಿಥ್ಯ ರಾಗದ್ವೇಷವನಳಿದು
ತನ್ನ ನಿಜದಲ್ಲಿ ತಾನೆ ಪರಿಣಾಮಿಯಾಗಿಪ್ಪ[ನು]
ಗುಹೇಶ್ವರಾ ನಿಮ್ಮ ಶರಣ.
Transliteration Bandudanatigaḷedu bāraduda bayasenembudu
oḍala guṇadharmarahitaṅgallade,
oḍala guṇadharma uḷḷavaṅge āgadu nōḍā.
Adentendaḍe:
Rājabhaya cōrabhaya mr̥gabhaya desebhaya strībhaya
bandu sōṅkidalli
heccu kundillade onde samavāgi kāṇabēku.
Kṣīra ghr̥ta navaratna ābharaṇa
mane man̄ca hasu dhana vaniteyaraBhōgaṅgaḷu, liṅgadāṇatiyinda bandavendu,
biḍade bhōgisuva aṇṇagaḷu nīvu kēḷiro,
madasokkidāne perbuli kāḷōraga mahājvāle
aprayatnadinda bandu sandhise,
sandu sanśayavillade `liṅgadāṇati' ennadiddaḍe
svayavacana virud'dha nōḍā.
Idu jīvajālaṅgaḷa upādhikeyallade nirupādhikeyalla.
Pēyāpēyavanaridu bhōgisabēku.
Bhaya lajje mōha uḷḷannakkara entappudo?
Idu kāraṇa-aṅgakkācāra, bhāvakke kēvala jñāna.
Bandittu bāradu emba tathyamithya rāgadvēṣavanaḷidu
tanna nijadalli tāne pariṇāmiyāgippa[nu]
guhēśvarā nim'ma śaraṇa.
Hindi Translation आये हुए को छोड़कर, न आनेवाले की चाह कहना
पेठ का गुणधर्म रहित के सिवा,
पेठ का गुणधर्म रहनेवाले को होता नहीं।
वह कैसे कहे तो--
राजभय, चोरभय, मृगभय, दशाभय, स्त्रीभय आछूके तो
ज्यादा कमी न रहे एक ही तरह देखना चाहिए।
क्षीर, घृत, नवरत्न, आभरण, घर, पलंग,गाय, धन, वनिताओं के भोगों को
लिंग की आज्ञा से आये समझ,
बिना छोड़े भोग करनेवाले भाइयों तुम सुनो,
मदगज बड़ाबाघ, काळोरग, महा ज्वाला
अप्रयत्नसे आकर मिले,
मिले संशय के बिना लिंग आज्ञा न कहें तो
स्वय वचन के विरूद्ध देख।
यह जीवजाल की ज्यादा चाह के बिना निरुपाधिक नहीं।
पेयापेय जानकर भोग करना चाहिए।
भय, लज्जा, मोह रहने तक कैसे होता?
इस कारण-अंग का आचार, भाव को केवलज्ञान।
आया था न आता- कहेंतथ्य मिथ्या, राग द्वेष मिठे।
अपने निज में खुद परिणामी बना हुआ
गुहेश्वरा तुम्हारा शरण।
Translated by: Eswara Sharma M and Govindarao B N