ವಚನ - 1355     
 
ಬಂದು ನಿಂದು ಮೊಲೆನೀರ ಮಿಂದವರೆಲ್ಲರು ಹೆಂಡತಿಯರಾಗಬಲ್ಲರೆ? ಬಂದು ನಿಂದು ಸುಳಿದು ಮಾಡುವರೆಲ್ಲರು ಸಂಗನಬಸವಣ್ಣನಂತೆ ಗುಹೇಶ್ವರಲಿಂಗವ ಬಲ್ಲರೆ?