ವಚನ - 1414     
 
ಭೂವಳಯ ಮಧ್ಯದ ಎಂಟೆಸಳ ಪದ್ಮದ ಮೇಲೆ ಸುಳಿವನ ಎಚ್ಚರಲೀಯ, ಕಂಟಕ ವಿರಹಿತನು, ನಂಟರಿಗೆ ವಿರೋಧಿಸಿ, ಇಳೆಯ ಗುಣ ರಹಿತನು, ಗಗನಕಮಲ ಕುಸುಮ ಪರಿಣಾಮದೊಳಗೆ ಪರಿಣಾಮಿ ನೋಡಾ! ತಾನೆಂಬುದ ಹುಸಿ ಮಾಡಿ, ಲಿಂಗಜಂಗಮ ದಿಟವೆಂದು ಸಕಲ ಸುಖಭೋಗಂಗಳನರ್ಪಿಸಿದ. ಗುಹೇಶ್ವರಾ [ಅದು], ನಿಮ್ಮ ಶರಣ ಬಸವಣ್ಣಂಗಲ್ಲದೆ ಇನ್ನಾರಿಗೂ ಅಳವಡದು.